ಚಳಿಗಾಲದಲ್ಲಿ ನಮ್ಮ ಆಹಾರ – ಚಟುವಟಿಕೆಗಳು ಹೇಗಿರಬೇಕು?

by Dr. Prasanna Venkatesh

ದೋಷಗಳ ಮೇಲೆ ಕಾಲದ ಪರಿಣಾಮ   : ಅತಿಯಾದ ಚಳಿಯಿಂದಾಗಿ ಶರೀರದಲ್ಲಿ ಕಫ ಸೇರುತ್ತಾ ಬರುತ್ತದೆ. ಇದರಿಂದ ಮುಂದೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕಫ ಶೇಖರಣೆಯಾಗದಂತೆ ಎಚ್ಚರ ವಹಿಸಬೇಕು.

ಅದೇ ರೀತಿ ಚರ್ಮ dry ಆಗುತ್ತಾದ್ದರಿಂದ ಅದಕ್ಕೆ ಸೂಕ್ತ ಎಚ್ಚರಿಕೆ ಅಗತ್ಯ.

ಆಹಾರ

  • ಜೀರ್ಣಕ್ಕೆ ಜಡವಾದ (heavy) ಆಹಾರ (ಪ್ರಮಾಣ ಮತ್ತು ಗುಣದಲ್ಲಿ).
  • ಗೋಧಿಹಿಟ್ಟಿನಿಂದ ಮಾಡಿದ ಪದಾರ್ಥಗಳು, ಭಕ್ಷ್ಯಗಳು, ಬಾರ್ಲಿಯ ಬಳಕೆ.
  • ಉಳಿದ ಆಹಾರಪದಾರ್ಥಗಳ ಬಳಕೆ ಸಾಮಾನ್ಯ ನಿಯಮದಂತೆ (ಅದನ್ನು ಶೀಘ್ರದಲ್ಲೇ ವಿವರಿಸಲಾಗುವುದು).
  • ಮಾಂಸಾಹಾರಿಗಳಾದರೆ ತುಪ್ಪ ಮಿಶ್ರ ಮಾಡಿದ ಮಾಂಸರಸ (soup) ಇತ್ಯಾದಿ.

ಪಾನೀಯ

  • ಪ್ರತಿನಿತ್ಯ ಬೆಳಗ್ಗೆ ನೀರನ್ನು (ಹಸಿ / ಒಣಗಿದ) ಶುಂಠಿ ಸೇರಿಸಿ ಕುದಿಸಿ, ಆ ನೀರನ್ನು ಬಾಯಾರಿದಾಗೆಲ್ಲ ಕುಡಿಯಲು ಹಿತವಾದ ಬಿಸಿ ಮಾಡಿ ಬಳಸುವುದು ಉತ್ತಮ.
  • ಕಾದಾರಿದ ನೀರಿಗೆ ಜೇನುತುಪ್ಪ ಸೇರಿಸಿ ಬಳಸಬಹುದು
  • ಮದ್ಯಪಾನ ಮಾಡುವವರಿಗೆ ಕೆಲವು specific Ayurvedic combinations ಹೇಳಿರುತ್ತಾರೆ. ವೈದ್ಯರ ಸಲಹೆ ತೆಗೆದುಕೊಂಡು ಬಳಸಬಹುದು. 

ವಿಹಾರ

  • ಪ್ರತಿನಿತ್ಯ ಅಭ್ಯಂಗ – ಸೂಕ್ತವಾದ ತೈಲಗಳನ್ನು ಶರೀರದ ಮೇಲೆ ಹಚ್ಚಿ ಕೆಲ ನಿಮಿಷಗಳ ನಂತರ ಬಿಸಿನೀರಿನ ಸ್ನಾನ. ಸ್ನಾನಕ್ಕೆ ಹಿಂದೆ ಉದ್ವರ್ತನಕ್ಕೆ ಹೇಳಿದಂತೆ ಪುಡಿಗಳನ್ನು ಬಳಸಿಕೊಳ್ಳಬಹುದು.
  • ಶರೀರ ಬೆವರುವಂತೆ ವ್ಯಾಯಾಮ
  • ಪ್ರತಿಯೊಂದು ಕೆಲಸಗಳಿಗೂ (ಕೈ-ಕಾಲು ತೊಳೆಯಲೂ ಕೂಡ) ಬಿಸಿನೀರಿನ ಬಳಕೆ ಉತ್ತಮ.
  • ದಪ್ಪನಾದ ಹತ್ತಿಯ ಬಟ್ಟೆಯ ಬಳಕೆ ಉತ್ತಮ.
  • ಅತಿಶೀತಪ್ರದೇಶದಲ್ಲಿ ವಾಸಿಸುವವರು ಮನೆಯೊಳಗೆ ಅಗ್ಗಿಷ್ಟಿಕೆ ಬಳಸುವುದು ಉತ್ತಮ.

Author is Chief Physician, Sriranga Ayurveda Chikitsa Mandira, Prakruthi Ayurveda Pratistana ®, Mysore

Ayurveda treatment in India from Prakruti Ayurveda Prathishtana (R) We are ready to help