ಬೇಸಿಗೆ ಕಾಲದ ನಮ್ಮ ಆಹಾರ – ಚಟುವಟಿಕೆಗಳು ಹೇಗಿರಬೇಕು ?

by Dr. Prasanna Venkatesh

ದೋಷಗಳ ಮೇಲೆ ಕಾಲದ ಪರಿಣಾಮ

ಬೇಸಿಗೆ ಕಾಲದ ತೀಕ್ಷ್ಣವಾದ ಬಿಸಿಲಿನಿಂದಾಗಿ ಶರೀರದಲ್ಲಿ ವಾತ ವೃದ್ದಿಯಾಗುತ್ತದೆ. ಜೀರ್ಣಶಕ್ತಿ (ಅಗ್ನಿ) ದುರ್ಬಲವಾಗುತ್ತದೆ. ಹಾಗಾಗಿ ಅಗ್ನಿಯನ್ನು ವೃದ್ಧಿಪಡಿಸುವ, ಶರೀರಕ್ಕೆ ತಂಪನ್ನು ಮತ್ತು ಬಲವನ್ನು ಕೊಡುವ ಆಹಾರ – ಪಾನೀಯಗಳನ್ನು ಸೂಚಿಸುತ್ತಾರೆ.

ಆಹಾರ

  • ಬಳಸುವ ಪದಾರ್ಥಗಳು ಜೀರ್ಣಕ್ಕೆ ಲಘುವಾಗಿದ್ದು ಸ್ವತಃ ಜೀರ್ಣಕ್ರಿಯೆಯನ್ನು ಹೆಚ್ಚಿಸುವಂತಿರಬೇಕು
  • ಹಳೆಯ ಅಕ್ಕಿ, ಗೋಧಿಯ ಪದಾರ್ಥಗಳು, ಮೆಂತ್ಯ,
  • ಬೇಳೆ-ಕಾಳುಗಳ ಬಳಕೆ ಮಿತವಾಗಿರಲಿ; ಬಳಸುವಾಗ ಸ್ವಲ್ಪ ತುಪ್ಪವನ್ನು ಸೇರಿಸಿ ಸಂಸ್ಕರಿಸಿ ಬಳಸಿ.
  • ಕೊತ್ತಂಬರಿ, ಕರಿಬೇವು, ಗಣಿಕೆ, ಕೀರೆ-ಕಿಲಕೀರೆ-ಮುಳ್ಳುಕೀರೆ, ದಂಟು (ಹರಿವೆ) ಇತ್ಯಾದಿ ಸೊಪ್ಪುಗಳು, ಹಾಲು, ಕಡೆದ ಮಜ್ಜಿಗೆ (ಬೆಣ್ಣೆ ತೆಗೆದಿರಬಾರದು, ಹುಳಿಯಾಗಿರಬಾರದು), ಬೆಣ್ಣೆ, ತುಪ್ಪ ಇತ್ಯಾದಿಗಳು
  • ಮಾವು, ಹಲಸು ಇತ್ಯಾದಿ ತಂಪನ್ನುಂಟುಮಾಡುವ ಹಣ್ಣುಗಳು
  • ಅತಿ ಉಪ್ಪು-ಹುಳಿ-ಖಾರ ಪದಾರ್ಥಸೇವನೆ ಬೇಡ

ಪಾನೀಯ       

  • ಎಳನೀರು ಅಥವಾ ಶರೀರಕ್ಕೆ ತಂಪನ್ನುಂಟುಮಾಡುವ ಇನ್ನಿತರ ಪದಾರ್ಥಗಳು,
  • ಶ್ರೀಗಂಧ / ಲಾವಂಚ /ಕಮಲದ ಗಡ್ಡೆ / ಧನಿಯಾ (ಕೊತ್ತಂಬರಿ ಬೀಜ) ಇತ್ಯಾದಿಗಳನ್ನು ಸೇರಿಸಿ ಬೆಳಿಗ್ಗೆ ಕುದಿಸಿಟ್ಟುಕೊಂಡು ತಣ್ಣಗಾದ / ಎಳೆಬೆಚ್ಚನೆಯ ನೀರು ದಿನವಿಡೀ ಬಳಸಲು ಉತ್ತಮ.
  • ಮೊಸರು ಬಳಸುವುದು ನಿಷೇಧಿಸಿದ್ದಾರೆ.
  • ಈ ಕಾಲದಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ.

ವಿಹಾರ 

  • ಹತ್ತಿಯ ಬಟ್ಟೆಗಳನ್ನು ಧರಿಸುವುದು.
  • ತಣ್ಣೀರಿನ ಸ್ನಾನ ಹಿತಕರ.
  • ತುಂಬ ಅಗತ್ಯವಿದ್ದಲ್ಲಿ ಶ್ರೀಗಂಧ ಇತ್ಯಾದಿ ತಂಪನ್ನುಂಟುಮಾಡುವ ಪದಾರ್ಥಗಳನ್ನು ಶರೀರದ ಮೇಲೆ ಲೇಪನ ಮಾಡಬಹುದು.
  • ಹಗಲು ನಿದ್ರೆ ಸ್ವಲ್ಪ ಪ್ರಮಾಣದಲ್ಲಿ ಮಾಡಬಹುದು.
  • ತಂಪಾಗಿರುವ ಉದ್ಯಾನವನಗಳಲ್ಲಿ ವಿಹಾರ.
  • ವ್ಯಾಯಾಮ, ಅತಿಯಾದ ಬಿಸಿಲಿನ ಸೇವನೆ ಒಳ್ಳೆಯದಲ್ಲ.

Author is Chief Physician, Sriranga Ayurveda Chikitsa Mandira, Prakruthi Ayurveda Pratistana ®, Mysore

Ayurveda treatment in India from Prakruti Ayurveda Prathishtana (R) We are ready to help