ವಸಂತ ಋತುವಿನ ನಮ್ಮ ಆಹಾರ – ಚಟುವಟಿಕೆಗಳು ಹೇಗಿರಬೇಕು?

by Dr. Prasanna Venkatesh

ವಸಂತ ಋತುವಿನ (Spring)- ಚಳಿಗಾಲ ಮುಗಿದ ನಂತರ

ದೋಷಗಳ ಮೇಲೆ ಕಾಲದ ಪರಿಣಾಮ

ಚಳಿಗಾಲದ ಚಳಿಯಿಂದ ಶರೀರದಲ್ಲಿ ಶೇಖರಣೆಯಾದ ಕಫವು ಬಿಸಿಲೆನ ತಾಪದಿಂದ ಕರಗಿ ಶರೀರದಲ್ಲಿ ಅನೇಕ ರೀತಿಯ ತೊಂದರೆಗಳಿಗೆ ಕಾರಣವಾಗಬಹುದು. ಪ್ರಧಾನವಾಗಿ ಶರೀರದಲ್ಲಿ (ಜಠರಾಗ್ನಿ) / ಜೀರ್ಣಶಕ್ತಿಯನ್ನು ಮಂದ ಮಾಡುತ್ತದೆ

ಇದರಿಂದ ಮುಂದೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಅಗ್ನಿಯನ್ನು ಕಾಪಾಡಿಕೊಳ್ಳುವ ಬಗ್ಗೆ ಎಚ್ಚರ ವಹಿಸಬೇಕು.

ಆಹಾರ

 • ಹಳೆಯ ಗೋಧಿಹಿಟ್ಟು / ಬಾರ್ಲಿಹಿಟ್ಟಿನಿಂದ ಮಾಡಿದ ಪದಾರ್ಥಗಳು, ಭಕ್ಷ್ಯಗಳು, ಬಾರ್ಲಿಯ ಬಳಕೆ.
 • ಬಳಸುವ ಪದಾರ್ಥಗಳು ಜೀರ್ಣಕ್ಕೆ ಲಘುವಾಗಿದ್ದು ಸ್ವತಃ ಜೀರ್ಣಕ್ರಿಯೆಯನ್ನು ಹೆಚ್ಚಿಸುವಂತಿರಬೇಕು
 • (ಹಳೆಯ ಅಕ್ಕಿ, ಹುರಿದ ಅಕ್ಕಿ, ಹೆಸರುಕಾಳು / ಬೇಳೆ, ಜೀರಿಗೆ, ಮೆಂತ್ಯ, ಶುಂಠಿ, ಕಾಳುಮೆಣಸು, ಓಮ ಇತ್ಯಾದಿ, ಕರಿಬೇವು, ಒಂದೆಲಗ, ಗಣಿಕೆ ಇತ್ಯಾದಿ ಸೊಪ್ಪುಗಳು, ಜೇನುತುಪ್ಪ, ಕಡೆದ ಮಜ್ಜಿಗೆ ಇತ್ಯಾದಿಗಳು
 • ಈ ರೀತಿಯ ಎಲ್ಲ ಆಹಾರಪದಾರ್ಥಗಳ ವಿವರಣೆಯನ್ನು ಶೀಘ್ರದಲ್ಲೇ ವಿವರಿಸಲಾಗುವುದು.

ಪಾನೀಯ       

 • ಪ್ರತಿನಿತ್ಯ ಬೆಳಗ್ಗೆ ನೀರನ್ನು (ಹಸಿ / ಒಣಗಿದ) ಶುಂಠಿ ಸೇರಿಸಿ ಕುದಿಸಿ, ಆ ನೀರನ್ನು ಬಾಯಾರಿದಾಗೆಲ್ಲ ಕುಡಿಯಲು ಹಿತವಾದ ಬಿಸಿ ಮಾಡಿ ಬಳಸುವುದು ಉತ್ತಮ.
 • ಕಾದಾರಿದ ನೀರಿಗೆ ಜೇನುತುಪ್ಪ ಸೇರಿಸಿ ಬಳಸಬಹುದು
 • ಕೆಲವು specific Ayurvedic combinations ಗಳ ತಿಳಿಯನ್ನು ಸೇವಿಸಲು ಮದ್ಯಪಾನ ಮಾಡುವವರಿಗೆ ಹೇಳಿರುತ್ತಾರೆ. ವೈದ್ಯರ ಸಲಹೆ ತೆಗೆದುಕೊಂಡು ಬಳಸಬಹುದು.

ವಿಹಾರ

 • ಸ್ನಾನಕ್ಕೆ ಹಿಂದೆ ಉದ್ವರ್ತನಕ್ಕೆ ಹೇಳಿದಂತೆ ಪುಡಿಗಳನ್ನು ಬಳಸಿಕೊಳ್ಳಬಹುದು.
 • ಶರೀರ ಬೆವರುವಂತೆ ಲಘು ವ್ಯಾಯಾಮ ಉತ್ತಮ.
 • ಹಗಲು ನಿದ್ರೆ ಕೂಡದು.

ಚಿಕಿತ್ಸಾ

 • ಕಫ ಅತಿಯಾಗಿ ಸಂಚಯವಾಗಿದ್ದಲ್ಲಿ ವೈದ್ಯರ ಸಲಹೆಯ ಮೇರೆಗೆ ವಮನ, ನಸ್ಯ ಇತ್ಯಾದಿ ಪಂಚಕರ್ಮಗಳನ್ನು ಮಾಡಿಸಿಕೊಳ್ಳಬಹುದು.
 • ಉದ್ವರ್ತನ (Powder massage) ಅನುಕೂಲಕರ.

Author is Chief Physician, Sriranga Ayurveda Chikitsa Mandira, Prakruthi Ayurveda Pratistana ®, Mysore

Ayurveda treatment in India from Prakruti Ayurveda Prathishtana (R) We are ready to help