Introduction to Ayurveda

Introduction to Ayurveda

by Dr. Prasanna Venkatesh

Ayurveda, the ancient medical science is developed over a long period of time by scholars and learned men of India.

The word Ayurveda is derived from 2 words. i.e, Veda (Knowledge) which deals with Ayu (life).

Ayurveda is a knowledge of life which deals with various aspect of shareera (body), indriya (organs), manas (mind) and Aatman (soul).

For healthy body and mind all of the above should be in a perfect state of harmony.

ಪ್ರತಿಯೊಂದು ಜೀವಿಯೂ ಸದಾ ಸುಖವಾಗಿರಬೇಕೆಂದೇ ಬಯಸುತ್ತದೆ. ಆದರೆ ಆ ಸುಖ ಯಾವುದರಿಂದ ಸಿಗುತ್ತದೆ ಎಂದರೆ “ಆರೋಗ್ಯದಿಂದಲೇ” . ಆದುದರಿಂದ ಸದಾಕಾಲದಲ್ಲೂ ಆರೋಗ್ಯ ಸಿದ್ಧಿಗಾಗಿ, ಆರೋಗ್ಯ ರಕ್ಷಣೆಗಾಗಿ ಪ್ರಯತ್ನಿಸಬೇಕು. ಅಂತಹ ಆರೋಗ್ಯ ರಕ್ಷಣೆಗಾಗಿ ಭಾರತೀಯರು ವಿಶ್ವಕ್ಕೆ ಕೊಟ್ಟ ಅಮೂಲ್ಯ ಕೊಡುಗೆ “ಆಯುರ್ವೇದ”.

ಆಯುರ್ವೇದ ಹೇಳುವಂತೆ ಧರ್ಮದ ಹೊರತಾಗಿ ಸುಖ ಇಲ್ಲ ಎಂದು. ಹಾಗಾಗಿ ಸರ್ವಪ್ರಕಾರಗಳಿಂದಲೂ ಧರ್ಮವನ್ನು ಕಾಪಾಡಬೇಕು ಎನ್ನುತ್ತದೆ. ಅತ್ಯಂತ ಸರಳವಾದ ಲೌಕಿಕ ಉದಾಹರಣೆ – “ನೋಡುವುದು” ಕಣ್ಣಿನ ಧರ್ಮ; “ಕೇಳುವುದು” ಕಿವಿಯ ಧರ್ಮ ಇತ್ಯಾದಿ. ಆಯಾ (ಇನ್ದ್ರಿಯಗಳ) ಧರ್ಮವನ್ನು ಕಾಪಾಡುವುದರಿಂದಲೇ ಶಾರೀರಿಕ ಆರೋಗ್ಯ ಸಿದ್ಧಿಸುತ್ತೆ. ಇದೇ ರೀತಿ ಮನೋಧರ್ಮ, ಆತ್ಮಧರ್ಮವನ್ನೂ ಕಾಪಾಡಿಕೊಳ್ಳಬೇಕು ಎಂಬುದು ಆಯುರ್ವೇದದ ಹಿರಿಯ ಆಚಾರ್ಯರಾದ ಚರಕರ ಅಭಿಪ್ರಾಯ.

ಹೀಗೆ ಆರೋಗ್ಯ ಸಿದ್ಧಿ ಹಾಗೂ ಆರೋಗ್ಯ ರಕ್ಷಣೆ ಹೇಗೆ ಮಾಡಬಹುದು ? ಎಂದರೆ, ಆಯುರ್ವೆದ ಆಚಾರ್ಯರು ಕೆಲವು ಉಪಾಯಗಳನ್ನು ಕೊಡುತ್ತಾರೆ.

  1. ಪ್ರತಿನಿತ್ಯವೂ ಹಿತವಾದ ಆಹಾರ ಸೇವನೆ ಮಾಡುವುದು.
  2. ಪ್ರತಿನಿತ್ಯ ತನಗೆ ಒಗ್ಗುವ (ತನ್ನಲ್ಲಿ ಯಾವುದೇ ರೀತಿಯ ಪ್ರಕೋಪ (ಏರಿಳಿತ) ವನ್ನುಂಟುಮಾಡದಿರುವ) ವಿಹಾರ (Activities) ಗಳನ್ನು ರೂಢಿಯಲ್ಲಿಟ್ಟುಕೊಳ್ಳುವುದು.
  3. ಸರಿ – ತಪ್ಪುಗಳನ್ನು ವಿವೇಚಿಸಿ ತನ್ನ ಆಚರಣೆಗಳನ್ನು ಇಟ್ಟುಕೊಳ್ಳುವುದು
  4. ಯಾವುದೇ ವಿಷಯಸುಖಗಳಲ್ಲಿ (ಆಳವಾಗಿ) ತೊಡಗಿಸಿಕೊಳ್ಳದಿರುವುದು
  5. ತನ್ನ ಅನುಕೂಲಕ್ಕೆ ತಕ್ಕಂತೆ ದಾನ ಮಾಡುವುದು
  6. ಸಕಲ ಜೀವಸಂಕುಲವನ್ನೂ ಸಮವಾಗಿ ಕಾಣುವುದು
  7. ಸತ್ಯವನ್ನೇ ನುಡಿಯುವುದು
  8. ಕ್ಷಮಾ ಗುಣವನ್ನು ಹೊಂದಿರುವುದು
  9. ತಾನು ಮಾಡತಕ್ಕ ಕೆಲಸಗಳಲ್ಲಿ ಆಪ್ತರ / ಜ್ಞಾನಿಗಳ ಮಾತನ್ನು ಅನುಸರಿಸುವುದು

ಇವುಗಳು ಎಲ್ಲ ರೀತಿಯ ಆರೋಗ್ಯಲಾಭವನ್ನು ತಂದುಕೊಡುತ್ತವೆ.

ಎಂತಹ ಮೌಲ್ಯಗಳು !!!

 

 

 


Author is Chief Physician, Sriranga Ayurveda Chikitsa Mandira, Prakruthi Ayurveda Pratistana ®, Mysore

Ayurveda treatment in India from Prakruti Ayurveda Prathishtana (R) We are ready to help