[ctitle title=”ಶರದೃತುವಿನಲ್ಲಿ ನಮ್ಮ ಆಹಾರ – ಚಟುವಟಿಕೆಗಳು ಹೇಗಿರಬೇಕು ?” font_size=”18″ big_border_en=”false” uppercase=”true” position=”left” color=”#000000″]
by Dr. Prasanna Venkatesh
ಶರದೃತು – ಸುಮಾರಾಗಿ ಸೆಪ್ಟೆಂಬರ್ – ಅಕ್ಟೋಬರ್ / ಶರನ್ನವರಾತ್ರಿಯ ಹಿಂದೆ-ಮುಂದೆ.
ದೋಷಗಳ ಮೇಲೆ ಕಾಲದ ಪರಿಣಾಮ
ಮಳೆಗಾಲದ ತಂಪನ್ನು ಹೊಂದಿದ ಶರೀರದಲ್ಲಿ ನಂತರ ಬರುವ ಈ ಕಾಲದ ಉಷ್ಣತೆಯಿಂದಾಗಿ ಪಿತ್ತ ಕೆರಳುತ್ತವೆ. ಜೀರ್ಣಶಕ್ತಿ (ಅಗ್ನಿ) ಮಧ್ಯಮವಾಗಿರುತ್ತದೆ.
ಆಹಾರ
- ಬಳಸುವ ಪದಾರ್ಥಗಳು ಜೀರ್ಣಕ್ಕೆ ಲಘುವಾಗಿದ್ದು ಶರೀರಕ್ಕೆ ತಂಪನ್ನುಂಟುಮಾಡುವಂತಿರಬೇಕು.
- ಹಳೆಯ ಅಕ್ಕಿ
- ಹೆಸರು ಬೇಳೆ-ಕಾಳುಗಳ ಮಿತವಾದ ಬಳಕೆ ಉತ್ತಮ;
ಬಳಸುವಾಗ ಸ್ವಲ್ಪ ತುಪ್ಪವನ್ನು ಸೇರಿಸಿ ಸಂಸ್ಕರಿಸಿ ಬಳಸಿ.
- ತರಕಾರಿಗಳಲ್ಲಿ ಬಳ್ಳಿ ತರಕಾರಿಗಳು – ಪಡುವಲ, ಬೂದುಗುಂಬಳ, ಹೀರೆ, ಸೋರೆ, ಸೌತೆ, ಹಾಗಲ, ನೆಲ್ಲಿಕಾಯಿ ಇತ್ಯಾದಿಗಳು ಬಳಸಲು ಯೋಗ್ಯ.
- ಹಾಲು, ಕಡೆದ ಮಜ್ಜಿಗೆ (ಬೆಣ್ಣೆ ತೆಗೆದಿರುವುದು), ಬೆಣ್ಣೆ, ತುಪ್ಪ ಬಳಸಬಹುದು.
- ಜೇನುತುಪ್ಪದ ಬಳಕೆ ಹಿತಮಿತವಾದ ಪ್ರಮಾಣದಲ್ಲಿ ಉತ್ತಮ.
- ಅತಿಪ್ರಮಾಣದ ಭೋಜನ, ಮೊಸರು, ಅತಿ ಉಷ್ಣ-ತೀಕ್ಷ್ಣ ಪದಾರ್ಥ ಬಳಸಕೂಡದು
ಪಾನೀಯ
- ಕುಡಿಯುವ ನೀರನ್ನು ಕುದಿಸುವಾಗ ಶರೀರಕ್ಕೆ ತಂಪನ್ನುಂಟುಮಾಡುವ ಶ್ರೀಗಂಧ, ಲಾವಂಚ, ಸೊಗದೇಬೇರು, ಧನಿಯಾ (ಕೊತ್ತಂಬರಿಬೀಜ) ಇತ್ಯಾದಿಗಳನ್ನು ಸೇರಿಸಿ ಕುದಿಸಿ-ತಣ್ಣಗಾದ ನಂತರ ಬಳಸುವುದು ಉತ್ತಮ.
- ಈ ಕಾಲದಲ್ಲಿ ಮದ್ಯಪಾನ ಒಳ್ಳೆಯದಲ್ಲ.
ವಿಹಾರ
- ಹಗಲು ನಿದ್ರೆ, ಅತಿಯಾಗಿ ಆಯಾಸವಾಗುವ ಕೆಲಸಗಳು ಇವುಗಳು ನಿಷಿದ್ಧ.
- ಅತಿ ಬಿಸಿಲಿನ ಸೇವನೆ ಒಳ್ಳೆಯದಲ್ಲ.
ಚಿಕಿತ್ಸಾ
- ಅವಶ್ಯಕತೆಯಿರುವಲ್ಲಿ ವಿರೇಚನ (ಔಷಧಿಗಳನ್ನು ಕುಡಿಸಿ ಭೇದಿಯಾಗುವಂತೆ ಮಾಡುವುದು),
- ರಕ್ತಮೋಕ್ಷಣ (ಕೆಟ್ಟ ರಕ್ತವನ್ನು ಬೇರೆಬೇರೆ ವಿಧಾನಗಳಿಂದ ಶರೀರದಿಂದ ತೆಗೆದು ಶರೀರ ಶುದ್ಧಿಯನ್ನು ಮಾಡುವ ಚಿಕಿತ್ಸೆ).
(ಚಿಕಿತ್ಸೆ ಬಗ್ಗೆ ನುರಿತ ಆಯುರ್ವೇದ ವೈದ್ಯರ ಸಲಹೆ ಅಗತ್ಯ)
Author is Chief Physician, Sriranga Ayurveda Chikitsa Mandira, Prakruthi Ayurveda Pratistana ®, Mysore