[ctitle title=”ಚಳಿಗಾಲದಲ್ಲಿ ನಮ್ಮ ಆಹಾರ – ಚಟುವಟಿಕೆಗಳು ಹೇಗಿರಬೇಕು?” font_size=”18″ big_border_en=”false” uppercase=”true” position=”left” color=”#000000″]
by Dr. Prasanna Venkatesh
ದೋಷಗಳ ಮೇಲೆ ಕಾಲದ ಪರಿಣಾಮ : ಅತಿಯಾದ ಚಳಿಯಿಂದಾಗಿ ಶರೀರದಲ್ಲಿ ಕಫ ಸೇರುತ್ತಾ ಬರುತ್ತದೆ. ಇದರಿಂದ ಮುಂದೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕಫ ಶೇಖರಣೆಯಾಗದಂತೆ ಎಚ್ಚರ ವಹಿಸಬೇಕು.
ಅದೇ ರೀತಿ ಚರ್ಮ dry ಆಗುತ್ತಾದ್ದರಿಂದ ಅದಕ್ಕೆ ಸೂಕ್ತ ಎಚ್ಚರಿಕೆ ಅಗತ್ಯ.
ಆಹಾರ
- ಜೀರ್ಣಕ್ಕೆ ಜಡವಾದ (heavy) ಆಹಾರ (ಪ್ರಮಾಣ ಮತ್ತು ಗುಣದಲ್ಲಿ).
- ಗೋಧಿಹಿಟ್ಟಿನಿಂದ ಮಾಡಿದ ಪದಾರ್ಥಗಳು, ಭಕ್ಷ್ಯಗಳು, ಬಾರ್ಲಿಯ ಬಳಕೆ.
- ಉಳಿದ ಆಹಾರಪದಾರ್ಥಗಳ ಬಳಕೆ ಸಾಮಾನ್ಯ ನಿಯಮದಂತೆ (ಅದನ್ನು ಶೀಘ್ರದಲ್ಲೇ ವಿವರಿಸಲಾಗುವುದು).
- ಮಾಂಸಾಹಾರಿಗಳಾದರೆ ತುಪ್ಪ ಮಿಶ್ರ ಮಾಡಿದ ಮಾಂಸರಸ (soup) ಇತ್ಯಾದಿ.
ಪಾನೀಯ
- ಪ್ರತಿನಿತ್ಯ ಬೆಳಗ್ಗೆ ನೀರನ್ನು (ಹಸಿ / ಒಣಗಿದ) ಶುಂಠಿ ಸೇರಿಸಿ ಕುದಿಸಿ, ಆ ನೀರನ್ನು ಬಾಯಾರಿದಾಗೆಲ್ಲ ಕುಡಿಯಲು ಹಿತವಾದ ಬಿಸಿ ಮಾಡಿ ಬಳಸುವುದು ಉತ್ತಮ.
- ಕಾದಾರಿದ ನೀರಿಗೆ ಜೇನುತುಪ್ಪ ಸೇರಿಸಿ ಬಳಸಬಹುದು
- ಮದ್ಯಪಾನ ಮಾಡುವವರಿಗೆ ಕೆಲವು specific Ayurvedic combinations ಹೇಳಿರುತ್ತಾರೆ. ವೈದ್ಯರ ಸಲಹೆ ತೆಗೆದುಕೊಂಡು ಬಳಸಬಹುದು.
ವಿಹಾರ
- ಪ್ರತಿನಿತ್ಯ ಅಭ್ಯಂಗ – ಸೂಕ್ತವಾದ ತೈಲಗಳನ್ನು ಶರೀರದ ಮೇಲೆ ಹಚ್ಚಿ ಕೆಲ ನಿಮಿಷಗಳ ನಂತರ ಬಿಸಿನೀರಿನ ಸ್ನಾನ. ಸ್ನಾನಕ್ಕೆ ಹಿಂದೆ ಉದ್ವರ್ತನಕ್ಕೆ ಹೇಳಿದಂತೆ ಪುಡಿಗಳನ್ನು ಬಳಸಿಕೊಳ್ಳಬಹುದು.
- ಶರೀರ ಬೆವರುವಂತೆ ವ್ಯಾಯಾಮ
- ಪ್ರತಿಯೊಂದು ಕೆಲಸಗಳಿಗೂ (ಕೈ-ಕಾಲು ತೊಳೆಯಲೂ ಕೂಡ) ಬಿಸಿನೀರಿನ ಬಳಕೆ ಉತ್ತಮ.
- ದಪ್ಪನಾದ ಹತ್ತಿಯ ಬಟ್ಟೆಯ ಬಳಕೆ ಉತ್ತಮ.
- ಅತಿಶೀತಪ್ರದೇಶದಲ್ಲಿ ವಾಸಿಸುವವರು ಮನೆಯೊಳಗೆ ಅಗ್ಗಿಷ್ಟಿಕೆ ಬಳಸುವುದು ಉತ್ತಮ.
Author is Chief Physician, Sriranga Ayurveda Chikitsa Mandira, Prakruthi Ayurveda Pratistana ®, Mysore