[ctitle title=”ಮಳೆಗಾಲದ ನಮ್ಮ ಆಹಾರ – ಚಟುವಟಿಕೆಗಳು ಹೇಗಿರಬೇಕು ?” font_size=”18″ big_border_en=”false” uppercase=”true” position=”left” color=”#000000″]
by Dr. Prasanna Venkatesh
ದೋಷಗಳ ಮೇಲೆ ಕಾಲದ ಪರಿಣಾಮ
ಶರೀರದಲ್ಲಿ ವಾತ ಅತಿಶಯವಾಗಿ ವೃದ್ದಿಯಾಗುತ್ತದೆ. ಮಾತ್ರವಲ್ಲ, ಈ ಕಾಲದ ವಾತಾವರಣದ ಕಾರಣದಿಂದಾಗಿ ಕಫ-ಪಿತ್ತಗಳೂ ಕೆರಳುತ್ತವೆ. ಜೀರ್ಣಶಕ್ತಿ (ಅಗ್ನಿ) ದುರ್ಬಲವಾಗುತ್ತದೆ. ಹಾಗಾಗಿ ಅಗ್ನಿಯನ್ನು ವೃದ್ಧಿಪಡಿಸುವ, ಶರೀರದಲ್ಲಿ ಮೂರು ದೋಷಗಳನ್ನೂ ಸರಿಪಡಿಸುವ ಆಹಾರ – ಪಾನೀಯಗಳನ್ನು ಸೂಚಿಸುತ್ತಾರೆ.
ಆಹಾರ
- ಬಳಸುವ ಪದಾರ್ಥಗಳು ಜೀರ್ಣಕ್ಕೆ ಲಘುವಾಗಿದ್ದು ಸ್ವತಃ ಜೀರ್ಣಕ್ರಿಯೆಯನ್ನು ಹೆಚ್ಚಿಸುವಂತಿರಬೇಕು
- ಹಳೆಯ ಅಕ್ಕಿ, ಗೋಧಿಯ ಪದಾರ್ಥಗಳು, ಮೆಂತ್ಯ, ಹುರುಳಿ
- ಹೆಸರು / ತೊಗರಿಬೇಳೆ-ಕಾಳುಗಳ ಮಿತವಾದ ಬಳಕೆ ಉತ್ತಮ;
ಬಳಸುವಾಗ ಸ್ವಲ್ಪ ಹರಳೆಣ್ಣೆಯನ್ನು ಸೇರಿಸಿ ಸಂಸ್ಕರಿಸಿ ಬಳಸಿ.
- ತರಕಾರಿಗಳ ಬಳಕೆಯೂ ಮಿತವಾಗಿರಬೇಕು. ಬಳಸುವುದಿದ್ದಲ್ಲಿ ಬಳ್ಳಿ ತರಕಾರಿಗಳು – ಪಡುವಲ, ಹೀರೆ, ಸೌತೆ ಇತ್ಯಾದಿಗಳನ್ನು ಮಿತವಾಗಿ ಬಳಸಲು ನಿರ್ದೇಶಿಸಿದ್ದಾರೆ.
- ಸೊಪ್ಪುಗಳ ಬಳಕೆ ಈ ಮಳೆಗಾಲದಲ್ಲಿ ನಿಷೇಧಿಸಿದ್ದಾರೆ.
- ಹಾಲು, ಮೊಸರು, ಕಡೆದ ಮಜ್ಜಿಗೆ (ಬೆಣ್ಣೆ ತೆಗೆದಿರುವುದು), ಬೆಣ್ಣೆ, ತುಪ್ಪ ಬಳಸಬಹುದು.
- ಉಪ್ಪು, ಹುಳಿ, ಎಣ್ಣೆ / ತುಪ್ಪ ಇತ್ಯಾದಿಗಳನ್ನು ಸೇರಿಸಿ ಸಂಸ್ಕರಿಸಿದ ಪದಾರ್ಥಗಳು
- ಜೇನುತುಪ್ಪದ ಬಳಕೆ ಹಿತಮಿತವಾದ ಪ್ರಮಾಣದಲ್ಲಿ ಉತ್ತಮ.
ಪಾನೀಯ
- ಶುದ್ಧವಾದ ಮಳೆಯ ನೀರನ್ನು / ಬಾವಿಯ ನೀರನ್ನೂ ಕುದಿಸಿ ಬಳಸುವುದು ಉತ್ತಮ.
- ಈ ಕಾಲದಲ್ಲಿ ಹಳೆಯ ಮದ್ಯವನ್ನು ಪಾನಕ್ಕಾಗಿ ಬಳಸಬಹುದಾಗಿದೆ..
ವಿಹಾರ
- ಸ್ನಾನ – ಪಾನಾದಿ ಪ್ರತಿಯೊಂದು ಕೆಲಸಗಳಿಗೂ ಬಿಸಿ ನೀರಿನ ಬಳಕೆ ಹಿತಕರ.
- ಹಗಲು ನಿದ್ರೆ, ಅತಿಯಾಗಿ ಆಯಾಸವಾಗುವ ಕೆಲಸಗಳು ಇವುಗಳು ವರ್ಜ್ಯ.
- ಒಂದೊಮ್ಮೆ ಬಿಸಿಲು ಬಂದಲ್ಲಿ ಅತಿ ಬಿಸಿಲಿನ ಸೇವನೆ ಒಳ್ಳೆಯದಲ್ಲ.
ಚಿಕಿತ್ಸಾ
ಅವಶ್ಯಕತೆಯಿರುವಲ್ಲಿ ಮೃದು ವಿರೇಚನ (ಔಷಧಿಗಳನ್ನು ಕುಡಿಸಿ ಭೇದಿಯಾಗುವಂತೆ ಮಾಡುವುದು), ಬಸ್ತಿ (ಔಷಧಯುಕ್ತ enema / ಗುದದ್ವಾರದ ಮುಖಾಂತರ ಔಷಧಿಗಳನ್ನು ನೀಡುವ ವಿಧಾನ)
Author is Chief Physician, Sriranga Ayurveda Chikitsa Mandira, Prakruthi Ayurveda Pratistana ®, Mysore